Member Login




Register Here

ಸ್ನೇಹ ಮ್ಯಾರೇಜ್ ಕನ್ಸಲ್ಟೆನ್ಸಿ

ಸ್ನೇಹ ಮ್ಯಾರೇಜ್ ಕನ್ಸಲ್ಟೆನ್ಸಿ ಇದರ ನಿರ್ವಾಹಕಿಯಾದ ಶ್ರೀಮತಿ ರೇಖಾ ಪಿ.ನಾಯ್ಕ್ ಇವರು ತಮಗೆಲ್ಲರಿಗೂ ಕೋರುವ ಹಾರ್ದಿಕ ಸ್ವಾಗತ. ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವರ ಹಾಗೂ ಶ್ರೀ ದುರ್ಗಾಪರಮೇಶ್ವರಿ ಕಟೀಲು ದೇವಿಯ ದಿವ್ಯ ಅನುಗ್ರಹದಿಂದ ನಮ್ಮ ಸಂಸ್ಥೆಯು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಪಟ್ಟಣದ ಹೃದಯ ಭಾಗವಾದ ಕೋರ್ಟ್ ರಸ್ತೆಯ, ಪುತ್ತೂರು ನಗರ ಸಭೆಯ ಎದುರು ಇರುವ ಮಂಗಳಾಮೃತ ಸೌಧದಲ್ಲಿ ಸ್ನೇಹ ಮ್ಯಾರೇಜ್ ಬ್ಯೂರೋ ಎಂಬ ನಮ್ಮ ಸಂಸ್ಥೆಯು 2012ರಲ್ಲಿ ಸ್ಥಾಪನೆಯಾಯಿತು. ಈಗ ನಮ್ಮ ಸಂಸ್ಥೆಯು ವಧು-ವರರ ಅನ್ವೇಷಣೆಯನ್ನು ತ್ವರಿತಗೊಳಿಸುವಲ್ಲಿ ಪ್ರಪಂಚದಾದ್ಯಂತ ಜನಪ್ರಿಯವಾಗಲು ಈಗ ಮೊದಲ ಬಾರಿಗೆ ಅಂತರ್ಜಾಲದಲ್ಲಿ ಪ್ರಸಾರಗೊಳ್ಳುತ್ತಿದೆ.

Read More

+91 948 0015724

ಸ್ನೇಹ ಮ್ಯಾರೇಜ್ ಕನ್ಸಲ್ಟೆನ್ಸಿಗೆ ಸ್ವಾಗತ

ಮದುವೆಗಳು ಸ್ವರ್ಗದಲ್ಲಿಯೇ ನಡೆದು ಹೋಗಿರುತ್ತದೆ. ಅಲ್ಲಿ ದೇವರ ಸನ್ನಿಧಿಯಲ್ಲಿ , ದೇವಾನು ದೇವತೆಗಳ ಉಪಸ್ಥಿತಿಯಲ್ಲಿ, ಗಾನ ಗಂಧರ್ವರ ಗಟ್ಟಿಮೇಳದಲ್ಲಿ, ಅಪ್ಸರೆಯರ ಕಲರವದಲ್ಲಿ ಮದುವೆಗಳು ನಡೆದಿರುತ್ತದೆ. ಸ್ವರ್ಗದಲ್ಲಿ ನಡೆದ ಮದುವೆಗಳಿಗೆಲ್ಲ ಅಗ್ನಿ ದೇವನೇ ಸಾಕ್ಷಿಯಾಗಿರುತ್ತಾನೆ ಮತ್ತು ಆ ಮದುವೆಗಳು ಚಿತ್ರಗುಪ್ತನ ದಾಖಲೆಗಳಲ್ಲಿ ದಾಖಲಾಗಿರುತ್ತದೆ. ಹಾಗೇ ಸ್ವರ್ಗದಲ್ಲಿ ನಡೆದ ಮದುವೆಗಳು ಜ್ಯಾರಿಯಾಗುವುದು ಮಾತ್ರ ಇಲ್ಲಿ ಭೂಲೋಕದಲ್ಲಿ. ಅಲ್ಲಿ ಸ್ವರ್ಗದಲ್ಲಿ ದೇವರು ಜೋಡಿ ಮಾಡಿ ಕಳಿಸಿದ ಜೋಡಿಗೇ ಮಾತ್ರ ಇಲ್ಲಿ ಅಕ್ಷತೆಕಾಳಿನ ಶುಭ ಹಾರೈಕೆ ಸಿಗುತ್ತದೆ, ಸಪ್ತಪದಿ ತುಳಿಯುವ ಭಾಗ್ಯ ಬರುತ್ತದೆ. ದೇವರು ಕಳಿಸಿದ ಜೋಡಿಯ ಮದುವೆಯಲ್ಲಿ ಮಾತ್ರ ದೇವರ ರಾಯಭಾರಿಯಾಗಿ ಅಗ್ನಿದೇವನೂ ಬಂದು ಆ ಮದುವೆಗೆ ಮತ್ತೊಮ್ಮೆ ಪ್ರತ್ಯಕ್ಷ ಸಾಕ್ಷಿಯಾಗುತ್ತಾನೆ. ಹಾಗೇ ಅಗ್ನಿಸಾಕ್ಷಿಯಾಗಿ ನಡೆಯುವ ಮದುವೆಗಳು ಯಾಗ ಯಜ್ಞಗಳಿದ್ದ ಹಾಗೇ. ಒಂದು ಯಾಗ ಯಜ್ಞದಿಂದ ಹೇಗೆ ಲೋಕಕಲ್ಯಾಣವಾಗುವುದೋ ಹಾಗೇ ಮದುವೆಗಳು ಎಂಬ ಯಾಗ ಯಜ್ಞದಿಂದ ಒಬ್ಬನ ಬದುಕಿನ ಕಲ್ಯಾಣವಾಗುವುದು. ಹಾಗಾದರೆ ನೀವು ನಿಮ್ಮ ಸ್ವರ್ಗದ ಸಂಗಾತಿಯ ತಲಾಶೆಯಲ್ಲಿದ್ದೀರಾ, ಸ್ವರ್ಗದಲ್ಲಿ ನಡೆದ ನಿಮ್ಮ ಮದುವೆಯನ್ನು ನೀವು ಮತ್ತೊಮ್ಮೆ ಇಲ್ಲಿ ಪ್ರತ್ಯಕ್ಷವಾಗಿ ಕಂಡು ಕಣ್ಣು ತುಂಬಿಕೊಳ್ಳ ಬೇಕಾ? ಬನ್ನಿ ನಾವು ನಿಮಗೆ ದೇವರು ಸ್ವರ್ಗದಲ್ಲಿ ಮದುವೆ ಮಾಡಿ ಕಳಿಸಿದ ನಿಮ್ಮದೇ ಸಂಗಾತಿಯನ್ನು ಹುಡುಕಿ ಕೊಡುತ್ತೇವೆ.